ಮುಖ ಮೇಲೆತ್ತುವ ಸುರೂಪಿಕ ಚಿಕಿತ್ಸೆ -
ನಮ್ಮ ಮುಖದ ಕಂಗಾಲ (ಸ್ಕೆಲಿಟನ್) ಯೌವನದ ದಿನಗಳಲ್ಲಿ ನುಣುಪಾಗಿ, ಬಲವಾಗಿ, ಅಲ್ಲಿರುವ ಸ್ನಾಯು, ಕೊಬ್ಬು ಮತ್ತು ಚರ್ಮದ ಪದರುಗಳಿಂದ ಇರಿಸಲ್ಪಟ್ಟಿರುತ್ತದೆ. ವಯಸ್ಸಾದಂತೆ, ಅದು ಈ ಮೂರು ಪದರುಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ. ಸ್ನಾಯುಗಳು ತಮ್ಮ ಬಿಗುಪು ಕಳೆದುಕೊಳ್ಳುತ್ತದೆ; ಗುರುತ್ವಾಕರ್ಷಣೆಯನ್ನು ನೆಣವನ್ನು ಕೆಳಕ್ಕಿಳಿಯುತ್ತದೆ ಮತ್ತು ಚರ್ಮ ತನ್ನ ಸ್ಥಿತಿಸ್ಥಾಪಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅದರಿಂದ ಮುಖ ಇಳಿದುಬೀಳುತ್ತದೆ. ಅದನ್ನೂ ಕಳೆಯುವ ಮುಖವನ್ನು ಮೇಲೆತ್ತುವ ಸುರೂಪಿಕ ಚಿಕಿತ್ಸೆ (ರೈಟಡೆಕ್ಟಮಿ) ರೂಪುಗೊಂಡಿದೆ.
ಅಂತಹ ಚಿಕಿತ್ಸೆಯಲ್ಲಿ ಮುಖ ಮತ್ತು ಕತ್ತಿನ ಚರ್ಮವನ್ನು ಅರೆಯ ಸ್ನಾಯುವಿನಿಂದ ಬೇರ್ಪಡಿಸಿ, ಅದನ್ನು ಹಿಂದಕ್ಕೆ ಮತ್ತು ಮೇಲಕ್ಕೆ ಎಳೆದು, ಹೆಚ್ಚಾದ ಚರ್ಮವನ್ನು ಕತ್ತರಿಸಿ, ನಂತರ ಮುಖ ಮತ್ತು ಕತ್ತಿನ ಮೇಲೆ ಚರ್ಮದ ಪದರು ನೆಲೆಯಾಗುವಂತೆ ಮಾಡಿ ಹೊಲಿಗೆ ಹಾಕುವುದು ಈ ಸುರೂಪಿ ಈ ಚಿಕಿತ್ಸೆಯ ಮೂಲ ಉದ್ದೇಶ.

ಇಂದು ಈ ಬಗೆಯ ಶಸ್ತ್ರಕ್ರಿಯೆಯನ್ನು ವ್ಯಕ್ತಿಗತವಾಗಿ ನಿರ್ಧರಿಸಲಾಗುತ್ತದೆ. ಅದಕ್ಕಾಗಿ ಅನುಸರಿಸುವ ತಾಂತ್ರಿಕ ವಿಧಾನಗಳು ಮಾರ್ಪಾಟುಗೊಂಡಿದೆ. ಈ ಬಗೆಯ ಶಸ್ತ್ರ ಚಿಕಿತ್ಸೆಯನ್ನು ಮಧ್ಯವಯಸ್ಸಿನಲ್ಲಿ ಕೈಕೊಳ್ಳಲಾಗುತ್ತದೆ. ಈ ಶಸ್ತ್ರಚಿಕಿತ್ಸೆ ವ್ಯಕ್ತಿಯ ಮುಖಚರ್ಯೆಯನ್ನು ಬದಲಿಸುತ್ತದೆ.

ಈ ವಿಧಾನವೆಂದರೆ ಅದು ಸುಕ್ಕುಗಳನ್ನು ತೆಗೆಯುವುದಿಲ್ಲ. ಹೆಚ್ಚಿನ ಚರ್ಮವನ್ನು ತೆಗೆದು ಮುಖದ ಉಬ್ಬುತಗ್ಗುಗಳಿಗೆ ಹೊಂದುವಂತೆ ಅಳವಡಿಸಿದ ಮೇಲೆ ಅಲ್ಲಿನ ಗೆರೆಗಳು ನುಣುಪಾಗುತ್ತವೆ. ಈ ಚಿಕಿತ್ಸೆ ಬಾಯಿ, ತುಟಿಯಮೇಲಿನ ನೇರಗೆರೆಗಳನ್ನು, ಕಣ್ಣಿನ ಸುತ್ತಣ ಕಪ್ಪು ವೃತ್ತಗಳನ್ನು ಕಳೆಯುವುದಿಲ್ಲ. ಅದಕ್ಕಾಗಿ ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಈ ಚಿಕಿತ್ಸೆ ಕೈಕೊಳ್ಳುವ ಪೂರ್ವದಲ್ಲಿ ವ್ಯಕ್ತಿ ಸ್ಥೂಲ ದೇಹಿಯಾಗಿದ್ದರೆ ತೂಕವನ್ನು ಇಳಿಸಬೇಕು. ಶಸ್ತ್ರಕ್ರಿಯೆಯ ತೊಡಕಾಗಿ ಚರ್ಮದ ಕೆಳಗೆ ರಕ್ತಕರಣೆಯಾಗಬಹುದು. ಮುಖದ ಚಲನೆ ಕುಗ್ಗಿ ಮುಖಭಾವ ತೇರ್ಪಡೆಗೆ ತೊಂದರೆಯಾಗಬಹುದು. ಕೆಲವೊಮ್ಮೆ ಇಷ್ಟೊಂದು ವ್ಯಾಪಕ ಶಸ್ತ್ರಕ್ರಿಯೆಯ ಬದಲು ಹಣೆಯನ್ನೂ ಎತ್ತರಿಸುವ, ಹುಬ್ಬು ಎತ್ತರಿಸುವ, ತುಟಿಯನ್ನು ಮೇಲಕ್ಕೇತ್ತುವ ಚಿಕ್ಕ ಶಸ್ತ್ರಕ್ರಿಯೆಯನ್ನು ಮಾಡಬಹುದು. 							
(ಡಾ. ಅರವಿಂದ ದೇಸಾಯಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ